ಬೆಂಗಳೂರಿಂದ ಊರಿಗೆ ಹೋಗಲು ರಾತ್ರಿಯ ದುರ್ಗಾಂಬ ಬಸ್ಸಿನಲ್ಲಿ ಹತ್ತಿ ಕುಳಿತ್ತಿದ್ದೆ. ಪ್ರಯಾಣಿಕರು ಒಬ್ಬೊಬ್ಬರಾಗಿ ಹತ್ತಿಕೊಳ್ಳುತ್ತಿದ್ದರು. ಮೊಬೈಲ್‌ನಲ್ಲಿ ಮಾತಾಡುತ್ತಲೇ ಒಳಗೆ ಬಂದ ಒಬ್ಬ ಯುವಕ ಒಂದೆರಡು ಸೀಟು ದಾಟುತ್ತಿದ್ದಂತೆಯೇ ತನ್ನ ಇನ್ನೊಂದು ಕೈಯಲ್ಲಿದ್ದ ಎರಡು ಮೂರು ಲಗೇಜ್‌ಗಳನ್ನು ಕೆಳಗಿಟ್ಟು ಅಲ್ಲೇ ತಟಸ್ಥನಾದ. ಇತರ ಪ್ರಯಾಣಿಕರು ಅಸಹನೆಯಿಂದ ಅವನ ಬೆನ್ನನ್ನು ತಟ್ಟುವ ತನಕ ಅವನ ಮಾತುಗಳು ಮುಂದುವರಿದಿತ್ತು. ಅಂತೂ ಒಂದು ಹತ್ತು ನಿಮಿಷದ ನಂತರ ಎಲ್ಲರೂ ತಂತಮ್ಮ ಸೀಟುಗಳಲ್ಲಿ ಸುಖಾಸೀನರಾದರು.ಬಸ್ಸು ಈಗಿನ್ನೂ ಹೊರಟಿತಷ್ಟೆ ! ಮುಂದಿನ ಸೀಟಿನ ಮಹಿಳೆ ತನ್ನ "ಸೆಲ್ 'ಅನ್ನು ಕಿವಿಗಾನಿಸಿಕೊಂಡಾಗಿತ್ತು. ""ಅಲ್ವೇ ರೂಪಾ, ಬಸ್ಸು ಈಗ ಹೊರಟಿತು ; ಮರ್ತೇ ಬಿಟ್ಟಿದ್ದೆ ನೋಡು, ನನ್ನ ಸರಸ್ವತಿ ಕಲರ್ ಸೀರೇನ ಇಸ್ತ್ರೀಯವನಿಗೆ ಕೊಡ್ಬೇಡ ಆಯ್ತಾ ! ಅವನೆಲ್ಲಾದ್ರೂ ಸುಟ್ಟುಗಿಟ್ಟು ಬಿಟ್ಟಾನು... ಹಾಂ ... ಪುಟ್ಟಂಗೆ ಚ್ಯವನಪ್ರಾಶ ಮರೀಬೇಡ....., ' ನನ್ನ ಹಿಂದಿನ ಸೀಟಿನಿಂದ ಒಂದು ಗಂಡು ಧ್ವನಿ ""ಹೌದೌದು, ಸೀಟೆಲ್ಲಾ ಸರಿಯಿದೆ, ಹೋಗಿ ಸೇರ್ತಾ ಫೋನ್ ಮಾಡ್ತೇನೆ ' ಬಹುಶಃ ಹೆಂಡತಿಗೆ ಗಂಡನ ಆಶ್ವಾಸನೆಯಿರಬಹುದು." " ಈ ಸಲವಾದ್ರೂ ಚೆನ್ನಾಗಿ ಬರೆ, ಈಚೆ ನಾನೂ ಇರೋದಿಲ್ಲ. ಉಂಡಾಡಿ ಗುಂಡನಂತೆ ಅಲೀಬೇಡ, ಚೆನ್ನಾಗಿ ಓದು' ಮಗನಿಗೆ ತಾಯಿಯ ಉಪದೇಶ.
" ಬರೀ ಎರಡೇ ದಿನ ತಾನೇ ಸ್ವೀಟೀ! ಹೀಗೆ ಹೋಗಿ ಹಾಗೆ ಬಂದಿºಡ್ತೇನೆ ' ಮೊಬೈಲಿಗೆ ಮುತ್ತು ಕೊಡುವ ಯುವಕ. ನನ್ನ ಪಕ್ಕದಲ್ಲಿ ಕಿಟಕಿಯ ಬಳಿ ಕುಳಿತಿದ್ದ ಯುವತಿ ಆಗಾಗ ನಾಚಿಕೊಳ್ಳುತ್ತ, ಮುಖ ಕೆಂಪೇರಲು, ಇಹದ ಪರಿವೆಯೇ ಇಲ್ಲದೆ ಕುಸುಕುಸು ಎಂದು ಅವಿರತವಾಗಿ ಅದೇನೋ ಉಲಿಯುತ್ತಿದ್ದಳು.
ಬಸ್ ನೆಲಮಂಗಲ ದಾಟಿದರೂ ತರತರದ "ರಿಂಗ್ - ಟೋನ್‌ಗಳು, ಹಲೋ, ಹಾಯ್‌ಗಳು ! ವ್ಯವಹಾರದ ಕೆಲವು ನೀರಸವಾದ ಮಾತುಕತೆಗಳನ್ನು ಬಿಟ್ಟರೆ ಉಳಿದೆಲ್ಲವುಗಳಲ್ಲೂ ಧ್ವನಿಸುವುದು ತಂತಮ್ಮ ಬಂಧು, ಬಾಂಧವರ ಅಥವಾ ಗೆಳೆಯರ ಕುರಿತಾದ ಅಭಿಮಾನ, ಪ್ರೀತಿ, ಕಾಳಜಿ !
ಈ ಬಗ್ಗೆ ಆಲೋಚಿಸುತ್ತಿದ್ದಂತೆ ಅದೇಕೋ ಅಪ್ರಯತ್ನವಾಗಿ ನನ್ನ ಸ್ಮತಿಪಟಲದಲ್ಲಿ ನನ್ನ ಬಾಲ್ಯದ ಒಂದು ನೆನಪು ಮೂಡಿ ಬಂತು. ಸುಮಾರು 10 ವರ್ಷಗಳಷ್ಟು ಹಳೆಯ ನೆನಪು !
ಹೊರಬಾಗಿಲ ಪಕ್ಕದಲ್ಲಿ ಸುಟ್ಕೆಸ್ ಮತ್ತು ಕೈಯಲ್ಲಿ ಒಂದು ಬ್ಯಾಗು! ಇನ್ನೂ ಹದಿನಾರು ಅಥವಾ ಹದಿನೇಳರ ಅಣ್ಣ "ಹೋಗಿ ಬರುತ್ತೇನೆ ' ಎಂದು ಪುನರುಚ್ಚರಿಸುತ್ತ ಎಲ್ಲ ಹಿರಿಯರ ಕಾಲಿಗೆ ಬಿದ್ದು ಬಿದ್ದು ಏಳುತ್ತಾನೆ. ಅಮ್ಮನಾದರೂ ಒದ್ದೆ ಕಣ್ಣನ್ನು ಸೆರಗಿನಿಂದ ಒರಸಿಕೊಳ್ಳುತ್ತ ಅಳುದನಿಯಲ್ಲಿ ಎಡೆಬಿಡದೆ ಉಪದೇಶ ಮಾಡುತ್ತಿದ್ದಾಳೆ. "ಹಾಳೂ ಮೂಳೂ ತಿನ್ಬೇಡ, ವಾರಕ್ಕೊಂದು ಸಲ ಎಣ್ಣೆ ನೀರು ಹಾಕ್ಕೋ, ಕೆಟ್ಟ ಹುಡುಗರಿಂದ ದೂರ ಇರು, ಮಲಗೋ ಮುಂಚೆ ಲಕ್ಷ್ಮೀ ನರಸಿಂಹ ಹೇಳು... ಪತ್ರ ಹಾಕು......'
ಎಲ್ಲದಕ್ಕೂ ಸರಿ ಸರಿ ಎಂದು ತಲೆಯಾಡಿಸುವ ಅಣ್ಣ ಬ್ಯಾಗು ಎತ್ತಿಕೊಂಡರೆ, ಸುಟ್ಕೆಸ್ ಎತ್ತಿಕೊಳ್ಳುವ ಅಪ್ಪ ಮನೆಯ ಅಂಗಳ, ಗೇಟನ್ನು ದಾಟಿ ರಸ್ತೆ ತಿರುವಿನಲ್ಲಿ ಮರೆಯಾಗುವ ವರೆಗೂ ನೋಡುತ್ತಿರುವ ಅಮ್ಮ ನಿಟ್ಟುಸಿರಿನೊಂದಿಗೆ ಕಣ್ಣೊರಸಿಕೊಂಡು ಒಳಗೆ ಬರುತ್ತಾಳೆ. ಕುಂತಲ್ಲೇ ಬಾi ಹೇಳಿದ್ದ ಅಜ್ಜ . ದುಕ್ಕವಾದರು ತೋರ್ಪಡಿಸದ ಅಜ್ಜಿ .""ಬಾರೋ ವಾಸು, ನಾಣೀ, ಕಮಲಿ, ತಟ್ಟೆಯಿಡಿ, ಊಟ ಬಡಿಸ್ತೇನೆ .. ಹಸಿವಾಗಲ್ವಾ ' ಎಂದು ಮನೆವಾರ್ತೆಯಲ್ಲಿ ತೊಡಗಿಕೊಳ್ಳುತ್ತಾಳೆ ಅಮ್ಮ . ಇದೀಗ ತಾನೇ ದೂರದ - ಊರಿಗೆ ದುಡಿಯಲು ಹೊರಟಿರುವ ಹಿರಿ ಮಗನ ಚಿಂತೆಯನ್ನು ತಾತ್ಕಾಲಿಕವಾಗಿ ಮನಸ್ಸಿನಿಂದ ದೂರ ಮಾಡುತ್ತಾಳೆ.
ಆಗ ನಾವಿದ್ದದ್ದು ನಗರದ ಒಂದು ಸಣ್ಣ ಊರಿನಲ್ಲಿ. ದೂರದ ಬೆಂಗಳೂರಿಗೆ ದುಡಿಯಲು ಈಗ ತಾನೇ ಮನೆ ಬಿಟ್ಟಿರುವ ಅಣ್ಣ ತುಂತುರು ಮಳೆಯನ್ನು ಲೆಕ್ಕಿಸದೆ ಬಸ್ಸಿಗಾಗಿ ಕಾಯುತ್ತಾನೆ. ದಡ ದಡ ಸದ್ದಿನೊಂದಿಗೆ ಬರುವ ಬಸ್ಸನ್ನು ಅವನು ಹತ್ತುತ್ತಿರುವಂತೆ ಬ್ಯಾಗನ್ನು ಹಸ್ತಾಂತರಿಸುವ ಅಪ್ಪ, "" ಜೋಕೆ, ಪತ್ರ ಹಾಕು' ಎಂದಷ್ಟೇ ಹೇಳುತ್ತಾರೆ.
ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಅಣ್ಣ ತನ್ನ , ಸಾಮಾನುಗಳನ್ನು ಒಂದೆಡೆಯಿಟ್ಟು , ಅದರ ಮೇಲೆಯೇ ಕುಳಿತುಕೊಂಡು, ಅಮ್ಮ ಕೊಟ್ಟಿದ್ದ ಮೆಂತೆ ದೋಸೆಯನ್ನು ತಿನ್ನುತ್ತ ಆಗಾಗ ಹಿಂಗೈಯಿಂದ ಕಣ್ಣೊರಸಿಕೊಳ್ಳುತ್ತಾನೆ.
ರಾತ್ರಿ 11ಕ್ಕೆ ಬರುವ - ಆಗಲೇ ತುಂಬಿರುವ ರೈಲಿಗೆ ಇತರ ಪ್ರಯಾಣಿಕರೊಂದಿಗೆ ತಾನೂ ನುಗ್ಗುವ ಅಣ್ಣ ಹೇಗಾದರೂ ರೈಲಿನೊಳಗೆ ತೂರಿಕೊಂಡು, ಅಷ್ಟೇನೂ ಪ್ರಶಸ್ತವಲ್ಲದ ಒಂದು ಬೆಂಚಿನಲ್ಲಿ ಜಾಗ ಪಡೆಯುತ್ತಾನೆ. ಕೂತಲ್ಲೇ ತೂಕಡಿಸುತ್ತ ಇರುಳು ಕಳೆದಿರಲು ಮರುದಿನ ಬೆಳಿಗ್ಗೆ ಇಳಿಯುವಾಗ ರೈಲಿನ ಮಸಿಯಿಂದ ಕಪ್ಪಾಗಿರುವ ಅಣ್ಣ ಹಸಿವು, ಬಳಲಿಕೆಗಳಿಂದ ಕಂಗಾಲಾಗಿರುತ್ತಾನೆ. ಸಿಟಿ ಸೇರಿದ ಸಮಾಧಾನದಲ್ಲಿ ಚಿಕ್ಕಪ್ಪನ ಮನೆ ಸೇರಿ ಸ್ನಾನ, ಊಟ ಮುಗಿಸುವಾಗ ದಿನ ಮುಗಿದಿರುತ್ತದೆ. ಮರುದಿನ ಕೆಲಸಕ್ಕೆ ಹೋಗಿ ಬಂದು ಸಂಜೆ ಅಚ್ಚುಕಟ್ಟಾಗಿ ಒಂದು ಪೋಸ್ಟ್ ಕಾರ್ಡನ್ನು ತಂದು ಅದರಲ್ಲಿ ಪುಟ್ಟ ಅಕ್ಷರಗಳಲ್ಲಿ ಮೂರು ದಿನಗಳ ಕಾಲ ಪತ್ರ ಬರೆದು ಅಂಚೆಗೆ ಹಾಕುತ್ತಾನೆ. ಆ ಪತ್ರ ಒಂದು ವಾರ ಪಯಣಿಸಿ ಹತ್ತನೆಯ ದಿನ ಹೆತ್ತವರಿಗೆ ತಲುಪಿದಾಗ ಇಲ್ಲಿ ಹಬ್ಬದ ವಾತಾವರಣ !
"" ಕೇಳಿದ್ಯೆàನೆ, ಪುಟ್ಟು ಕ್ಷೇಮವಾಗಿ ಸೇರಿದ್ದಾನಂತೆ!' ಎನ್ನುವ ತಂದೆಯವರೊಂದಿಗೆ " ""ಹೌದೇ ಎಂದು ದನಿಗೂಡಿಸಿ ಸಂತಸಪಡುವ ಅಮ್ಮ ಆ ಪತ್ರವನ್ನು ಮತ್ತೆ ಮತ್ತೆ ಓದಿ ನಿಲುವಗನ್ನಡಿಯ ಹಿಂದೆ ಜೋಪಾನವಾಗಿ ಸಿಕ್ಕಿಸಿ ಬಿಡುತ್ತಾಳೆ.ಇನ್ನು ಮುಂದಿನ ರಜೆ ಯಾವಾಗಲೋ ?ಎಂದು ತನ್ನಷ್ಟಕ್ಕೆ' ಹೇಳಿಕೊಳ್ಳುತ್ತಾಳೆ.
ದುಡಿಮೆಗೆಂದು ಮನೆಯಿಂದ ಹೋಗುವ ಮಗನು ಪ್ರಯಾಣದಲ್ಲಿ , ಪರವೂರ ವಾಸ್ತವ್ಯದಲ್ಲಿ ಎದುರಿಸುವ ಕಷ್ಟಗಳ ಕಲ್ಪನೆ ಅವಳಿಗಿಲ್ಲವೆಂದಲ್ಲ; ಆದರೆ ತಾನು ಅನುದಿನ ಮಾಡುವ ಪ್ರಾರ್ಥನೆ ಮತ್ತು ಹಿರಿಯರ ಆಶೀರ್ವಾದದಿಂದ ಮಗನು ಜಯಶಾಲಿಯಾಗುವನೆಂಬ ದೃಢ ನಂಬಿಕೆಯೇ ಅವಳ ಬಲ !
ಆ ಕಾಲವೇ ಹಾಗಿತ್ತು ! ಮಕ್ಕಳನ್ನು ದೂರದೂರಿಗೆ ಕಳುಹಿಸಿ ಅವರಿಂದ ಬರುವ ಪತ್ರಗಳಿಗಾಗಿ ಚಾತಕ ಪಕ್ಷಿಗಳಂತೆ ಕಾಯುವ ಪರಿಸ್ಥಿತಿ ! ಈಗ ಇದೋ, "ಮೊಬೈಲ್ ' ಎಂಬ ಪುಟ್ಟ ಉಪಕರಣ ಮತ್ತು ಇದರ ಅಕ್ಕತಂಗಿಯರಿಂದಾಗಿ ಇಡೀ ವಿಶ್ವವೇ ಕುಗ್ರಾಮವೆನಿಸಿದೆ. ಒಂದು ಗುಂಡಿಯನ್ನು ಒತ್ತಿದರೆ ಸಾಕು, ಸಪ್ತ ಸಮುದ್ರದಾಚೆಯಿರುವ ನಿಮ್ಮ ಬಾಂಧವರನ್ನು ಸಂಪರ್ಕಿಸಿ ಅವರ ಧ್ವನಿಯನ್ನೂ ಕೇಳಬಹುದು. ಕಿರು ಬೆರಳಿಗಿಂತಲೂ ಕಿರಿದಾದ ಯಂತ್ರದಿಂದ, ಇನ್ನೊಂದು ಭೂ ಖಂಡದಲ್ಲಿರುವ ದೈನಂದಿನ ಚಟುವಟಿಕೆಗಳನ್ನು, ಯೋಗ ಕ್ಷೇಮ ವಿಚಾರಗಳನ್ನೂ ಪರದೆಯ ಮೇಲೆ ಪ್ರತ್ಯಕ್ಷವಾಗಿ ನೋಡಬಹುದು. ಅಂದ ಮೇಲೆ ಈ ಹೊಸ ಆವಿಷ್ಕಾರಗಳು ವಿಶ್ವಬಾಂಧತ್ವವನ್ನು, ಪರಸ್ಪರರಲ್ಲಿ ಆದರಾಭಿಮಾನಗಳನ್ನು ವೃದ್ಧಿಸಲು (ಎಸ್ಟೋ ಮನೆಗಳನ್ನ ಹಾಳುಮಾಡಲು)ಸಹಕಾರಿಯಾಗಿವೆ ಎಂದು ತಾರ್ಕಿಕವಾಗಿ ಹೇಳಬಹುದೇನೋ !
ಆದರೆ ಇಂದು ಆಗುತ್ತಿರುವುದು ಅದರ ವಿರುದ್ಧ ಪರಿಣಾಮಗಳು. ! ಎಲ್ಲೆಲ್ಲೂ ಅಭದ್ರತೆಯ ಭಾವನೆ ! ಆಸ್ತಿಗಾಗಿ ಹೆತ್ತವರನ್ನೇ ಕೊಲ್ಲುವ ಮಕ್ಕಳಿರುವಾಗ, ತಮ್ಮ ಹೆಂಡತಿ- ಮಕ್ಕಳನ್ನೇ ನಿರ್ದಾಕ್ಷಿಣ್ಯವಾಗಿ ಹೊಡೆಯುವ ಅಪ್ಪಂದಿರುವಾಗ ಇಂಥ ಸ್ಥಿತಿಗೆ ಏನೆನ್ನಬೇಕು? ಒಂದು ಸೆಂಟ್ಸ್ ಜಾಗದಲ್ಲಿರುವ ಸೂರಿಲ್ಲದ ಮನೆಗಾಗಿ ಹೊಡೆದಾಡುವ ರಾಮ, ಸೋಮ ಸಹೋದರರು ಇಲ್ಲಿ ; ಅಂತೆಯೇ ದೊಡ್ಡ ಉದ್ಯಮಪತಿಗಳಾಗಿದ್ದೂ ಪರಸ್ಪರ ಔಡು ಕಚ್ಚುವ ಅಂಬಾನಿ ಸೋದರರು ಅಲ್ಲಿ !
ವರ್ಷಗಟ್ಟಲೆ ಫೋನ್ ಮಾತಾಡಿ, ಹೊಟೇಲ್, ಸಿನೆಮಾ ತಿರುಗಿ ಆನಂತರ ನಡೆಯುವ ಮದುವೆಗಳಲ್ಲೂ ಹತ್ತರಲ್ಲಿ ನಾಲ್ಕು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ.ಹೇರಳವಾಗಿ ಸಂಪಾದಿಸುತ್ತ ಸುಖೋಪಕರಣಗಳನ್ನು ಹೊಂದಿರುವ ಮಕ್ಕಳಾ ಹೆತ್ತವರು ಕೆಲಸದವಳ ಕಣ್ಗಾವಲಿನಲ್ಲಿ ಅಥವಾ ದೂರದ ಬೋರ್ಡಿಂಗ್‌ನಲ್ಲಿದ್ದಾರೆ ! ಹತ್ತಾರು ಸಣ್ಣ, ದೊಡ್ಡ ರೋಗಗಳಿಂದ ನರಳುತ್ತಿರುವ ಮುದಿ ತಾಯಿ - ತಂದೆ ವೃದ್ಧಾಶ್ರಮದಲ್ಲಿ ! ಎಲ್ಲರಿಗೂ ತಮ್ಮ ನಿಲುವೇ ಸರಿ ! ಯಾರೂ ಇಲ್ಲಿ. ಯಾರಿಗಾಗಿಯೂ ಬಿಟ್ಟುಕೊಡುವ. ಹೊಂದಿಕೊಳ್ಳುವ ಮಾತೇ ಇಲ್ಲ ! ತನ್ನ ಮನೆಯೊಳಗೇ ಹೊಂದಿಕೆಯಿಲ್ಲದ ಮೇಲೆ ನೆರೆಮನೆ, ನೆರೆ ರಾಜ್ಯ, ನೆರೆ ದೇಶಗಳೊಂದಿಗೆ ಗೆಳೆತನ ಸಾಧ್ಯವೇ ಎಲ್ಲೆಲ್ಲೂ ಅಹಂ ಮತ್ತು ಸ್ವಾರ್ಥ !
ಈ ತರ ಮೃದು ಭಾವನೆಗಳನ್ನು ಜೀವಂತವಾಗಿಡಲು ಅಸಮರ್ಥವಾಗಿ ಹೋದ ಈ ಆವಿಷ್ಕಾರಗಳ ಬಗ್ಗೆ ಚಿಂತಿಸುತ್ತ ಹಾಗೆಯೇ ನಿದ್ರೆಗೆ ಜಾರಿದೆ. ಮತ್ತೆ ಎಚ್ಚರವಾದದ್ದೂ ಮೊಬೈಲ್ ಧ್ವನಿಗಳಿಂದಲೇ. "" ಹಾಂ , ನಗರ,,, ಆಗಲೇ ಹೋಗಿಯಾಯಿತು, ಈಗ ಚಿಕ್ಕಪೇಟೆ ' ""ಕಾರು ಬೇಡಪ್ಪ, ರಿಕ್ಷಾ ಸಿಗುತ್ತೇ...' ಇತ್ಯಾದಿ.
ನಾನು ಇಳಿಯುವ ಸ್ಥಳ ಸಮೀಪಿಸುತ್ತಿರಲು, ನನ್ನ ಚೀಲಗಳನ್ನು ಜೋಡಿಸುತ್ತಿದ್ದಂತೆ ನನ್ನ ಕಣ್ಣುಗಳು ಮಂಜಾದವು.ಹೌದು ಹದಿನೈದು ದಿನಗಳ ಹಿಂದೆ, ತಮ್ಮ 80ನೇ ವಯಸ್ಸಿನಲ್ಲಿ , ( ಮಕ್ಕಳು ಸರದಿಯಂತೆ ಅಕ್ಕರೆಯಿಂದ ಗೌರವದಿಂದ ನೋಡಿಕೊಂಡರು ಅನ್ನಬೇಕಟ್ಟೆ).ಅಜ್ಜ ಹಾಸಿಗೆ ಹಿಡಿದಾಗ ಅವರನ್ನ" ' ಎತ್ತಿ ಇಳಿಸಿ ಪಕ್ಕದಲಿದ್ದ ನಮ್ಮಪ್ಪ ೫೦ ರ ಪ್ರಾಯವಾದರೂ ೮೦ ರ ಅಪ್ಪನಿಗಾಗಿ ಬಿಕ್ಕಿ ಬಿಕ್ಕಿ ಅತ್ತಿದನ್ನು ಮರೆಯಲಾದೀತೆ !!ಇಂತ್ತ ಮಕ್ಕಳು ಮುಂದೆ ಸಿಗುವರೇ