ಆ ನಂಬರ್ ಡಿಲಿಟ್ ಮಾಡೋಕಾಗಲ್ಲ ...............!
ಹಾಗೆ.... ಅದೊಂದು ಸಂಖ್ಯೆ ಮೊಬೈಲ್ನಲ್ಲಿ ಉಳಿದು ಹೋಗಿದೆ ಡಿಲಿಟ್ ಮಾಡಿಬಿಡೋಣ ಎಂದು ಕೊಂಡಾಗಲೆಲ್ಲ ಮನಸ್ಸು ನೆನಪುಗಳ ಖಜಾನೆ. ಆ ಸಂಖ್ಯೆಇಂದ ಇನ್ನು ಯಾವತ್ತಿಗೂ ಕರೆ ಬರುವುದಿಲ್ಲವೆಂದು ಗೊತ್ತಿದರು ಸಹ ಅಳಿಸಲು ಸಾದ್ಯವಾಗುದಿಲ್ಲ ಅವರು ತಮ್ಮ ಬದುಕಿನಿಂದ ಮಾತ್ರ ಎದ್ದುಹೊಗಿಲ್ಲ ಈ ಜಗತ್ತಿನಿಂದಲೇ ಹೊರಟು ಬಿಟ್ಟಿದ್ಧಾರೆ . ಯಾರಹಂಗು ಇಲ್ಲದಂತೆ ತಮ್ಮ ಪಾಡಿಗೆ ಹೋದವರನ್ನು ಮೊಬೈಲ್ ಸಂಕ್ಯೇಯಲ್ಲಾದರು ಹಿಡಿದಿಡುವಾ ಚಿಕ್ಕಯತ್ನ ಬಾವುಕಥೆಯೋ . ನೆನಪುಗಳ ಋಣವ್ಹೋ. ಗೊತ್ತಿಲ್ಲ! ಅದ್ಯಾವ ಭಾವವೆಂಬ ಸ್ಪಸ್ಥತೇ ಕೂಡ ಬೇಕಿಲ್ಲ. ಒಟ್ಟಿನಲ್ಲಿ ಆ ಜೀವದೊಂಧಿಗಿದ್ದ ಅಪ್ತ್ತತೆಯನ್ನು ಅವರ ಆ ಸಂಕ್ಯೇಯಲ್ಲಿಯೂ ಕಾಣುವ ಸಾರ್ತಕ್ಯ ಉಳಿದುಬಿಟ್ಟರೆಸಾಕು.
ಅಷ್ಟಕ್ಕೂ ಅವರು ದಿನನಿತ್ಯದ ಸುಖದುಕ್ಕಗಳನ್ನ ಹಂಚಿಕೊಳ್ಳುವ ಗೆಳೆಯರಾಗಿರಲಿಲ್ಲ . ಅಪರೂಪಕೊಮ್ಮೆ ವಿಚಾರಿಸಿಕೊಳ್ಳುವ ಸ್ನೇಹಿತರಸ್ಟೇ ಅವರ ಸ್ನೇಹಿತರ ಲಿಸ್ಟಿನಲ್ಲಿ ನಾವು ಎಸ್ಟನೆಯವರೋ. ಏನೋ? ಆದರೂ ಆ ಮನದಿಂದ ಈ ಮನಕ್ಕೆ ಸೂಕ್ಸ್ಮಾ ಸನಿಹ ಇದ್ದೆಇತ್ತು ಅದು ನಿರ್ಮಿಸಿದ್ದ ಆತ್ಮೀಯ ಬಂದಕ್ಕೆ ಹೆಸರಿಡಲು ಸಾದ್ಯವಿಲ್ಲ. ಕೆಲಾಒಬ್ಬರಬಗ್ಗೆ ಹಾಗಾಗುತ್ತದೆ ಅವರು ಕ್ಲಾಸ್ಮೇಟ್ .ಪ್ರೆಂಡ್. ಗುರು.ಏನೆಲ್ಲಾ ಆಗಿರಬಹುದು. ಅವರು ಬದುಕಿಲ್ಲ ಎನ್ನುವ ಅರಿವಿರುತದೆ ಆದರೆ ಅದರ ಅರಿವೇ ಇಲ್ಲದಂತ್ತೆ ಬದುಕಿಬಿಡೋಣ ಎಂದೆನಿಸುತದೆ ಹಾಗಾಗಿಯೇ ಆ ಸಂಖ್ಯೆಯನ್ನು ಮೊಬೈಲ್ನಲ್ಲಿ ಜಾಗ ಇಲ್ಲದಿದದ್ದಾಗಕೂಡ ಬೇರೆ ಯಾವುದನ್ನೊ ಡಿಲಿಟ್ ಮಾಡಿ ಹೊಸತನಕ್ಕೆ ಎಂಟ್ರಿಕೊಡುತ್ತೆವೆಯೇ ಹೋರತು ಅದನ್ನು ಮುಟ್ಟಲು ಹೋಗುದಿಲ್ಲ ಹೀಗಾಗಿ ಅವರ ನಂಬರಗೆ ಶಾಶ್ವತಸ್ಥಾನ. ಮೊಬೈಲ್ ಅಲ್ಲದೆ landline ನಂಬರ್ ಆದರೆ ಆಗಾಗ್ಗೆ ವಿಚಿತ್ರಾ ರೋಮಾಂಚನ ಅನುಬವಕ್ಕೆ ಬರುತ್ತದೆ ಅ ಕಡೆಇಂದ ಆಕಸ್ಮಾತ್ ಬೇರೆಯಾರಾದರೂ ಫೋನು ಮಾಡಿದರೆ ಅವರೇ ಇರಬಹುದಾ ಎನ್ನುವಾ ಬ್ರಮೆ ಅತ್ತ ಕಡೆಇಂದ ಬೇರೆ ದ್ವನಿ ಕೇಳಿದಾಗಲೇ ವಾಸ್ತವದ ಅರಿವು
ಆತ್ಮಿಯರೋಬ್ಬರಾ ಗೈರಿನಲ್ಲಿ ಹೀಗಿರುವುದೇ ಆದರ್ಶ ಎಂದೆಲ್ಲಾ ನೆನಪನ್ನು ಉಳಿಸಿಕೊಳ್ಳುದು ಈ ಮೂಲಕ. ಅವರ ನೆನಪುಗಳೇ ಆಗಾಗ ಮುಖಾಮುಕಿ ಆಗೂದು ಅವರು ಇಲ್ಲದಾಗಿನ ತಲ್ಲಣಕ್ಕೆ ಮತೊಮ್ಮೆ ಸಾಕ್ಷಿ ಆಗೋದು ತಪ್ಪಲ್ಲ ಬಂದುಗಳೇ ಹಾಗೆ ಅದಕ್ಕೆ ಬಾವ ಬೇಕಿಲ್ಲ ನೀಡುವಾ ಅನುಭೂತಿಯೊಂದೇ ಸಾಕು, ಅದು ನಮ್ಮ ಮನದ ವಿಕ್ನೆಸ್ ಎಂದು
ಮೇಲ್ನೋಟಕ್ಕೆ ಹೇಳಿಬಿಡಬಹುದು ಅಸಲಿಗೆ ಅದು ಸೌಂದರ್ಯ. ಸರಳ. ಸಂವೇದನಾಶೀಲ ಮನದ ಸುಸ್ಥಿತಿಯು ಹೌದು ಅವರಿಲ್ಲದಾಗಿಯೂ ಅವರ ಸ್ನೇಹಾ ನಮ್ಮನ್ನ ಕಟ್ಟಿಹಾಕುವ ಸಿತಿಗೆ ಇನ್ನೆನುಬಳಸಬಹುದು,
ಸ್ನೇಹಿತರೆ ಇದನ್ನು ಎಲ್ಲೋ ಓದಿದ ನೆನಪು, ಹಾಗೆ ಮಾಡಲು ಕೆಲಸವಿಲ್ಲದಾಗ ಕೀಬೋರ್ಡ್ ಮೇಲೆ ಕುಟುಕಿದ್ದೇನೆ ಸ್ವಿಕರಿಸುದು ಬಿಡುವುದು ನಿಮಗೆ ಬಿಟ್ಟಿದು, ಒಂದಂತು ನಿಜ ಇದನ್ನ ಓದುವಾಗ ನಾವೂ ಹೀಗೆ ಮಾಡಿದ್ದೆವು ಎನ್ನುವಾ ನೆನಪಂತು ನಿಜ ಅಥವಾ ನಿಮ್ಮಲಿಯು ಇಂಥ ಸಂಖ್ಯೆ ಇರಬಹುದು ಒಮ್ಮೆ ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ ನಿಜ ಅನಿಸಿದರೆ ಕಮೆಂಟ್ ಕೊಡಿ
No comments:
Post a Comment