ಮಲೆನಾಡಿನ ಸ್ನೇಹಿತರೆ ...................!!!
ದೂರದ ಸಿಟಿಯಲ್ಲಿ ಕುಳಿತು, ವಾಹನಗಳ ಕಿರಿ ಕಿರಿಯಲ್ಲಿ, ಟ್ರಾಫಿಕ್ ಜಾಮ್ ಎಂಬ ಪೆಡಂಭೂತದ ಮದ್ಯೆ, ಜನಸಂದಣಿಯ ರಗಳೆಯಲ್ಲಿ,ವಾಹನಗಳ ಹೊಗೆಯನ್ನು ಸಹಿಸದೆಯೂ ಸಹಿಸಲೇಬೇಕಾಗಿರುವ ದುರ್ವಿಧಿಯಲ್ಲಿ,ಕಿವಿ ಗಡಚಿಕ್ಕುವ ಶಬ್ಧಗಳ ಸಂತೆಯಲ್ಲಿ,ಜೀವನಕ್ಕಾಗಿ ದುಡಿದು ದಣಿಯಲೇಬೇಕಾದ ಸಂದಿಗ್ಧತೆಯಲ್ಲಿ, ಕುಳಿತಿರುವ ಮಹಾನಗರಿಯ ಓ ನನ್ನ ಸ್ನೇಹಿತರೇ
ನಿಮಗಿದೋ ಸುಂದರ ಮಲೆನಾಡಿಗೆ ಸ್ವಾಗತ
ಮಲೆಗಳ ನಾಡು, ವಿಂದ್ಯಪರ್ವತಗಳ ತಪ್ಪಲು ಈ ಮಲೆನಾಡು, ಬರೋಬ್ಬರಿ ತಿಂಗಳುಗಟ್ಟಲೆ ಮಳೆ ಗಿಜಿಗುಡುವ ನಾಡು ಈ ಮಲೆನಾಡು,
ಮುಂಜಾನೆಯೆನ್ನದೆ, ರಾತ್ರಿಯೆನ್ನದೆ ದಟ್ಟ ಆವಿಯನ್ನು ಹೊರಸೂಸುತ್ತಾ ಇಡೀ ಪ್ರಕೃತಿಯನ್ನೇ ತನ್ನ ಮಡಿಲೊಳಗೆ ಹಾಕಿಕೊಂಡು ನೋಡುಗರಿಗೆ ನಿರಾಶೆಯ ಜೊತೆಗೆ ರಸದೌತಣವನ್ನು ನೀಡುವುದೇ ಈ ಮಲೆನಾಡು .
ಒಮ್ಮೆ ಬಂದು ಈ ಪ್ರಕೃತಿಯ ಸೊಬಗನ್ನು ಕಣ್ಣಾರೆ ಕಂಡು, ಮನಸೂರೆಗೊಂಡು, ಈ ನಮ್ಮ ಮಲೆನಾಡಿನ ಸೊಬಗನ್ನು, ಸುಂದರ ಪ್ರಕೃತಿಯನ್ನು ನೋಡಿ ಹೊಟ್ಟೆಕಿಚ್ಚು ಪಟ್ಟು,
ನಿಮ್ಮಮನಸಿನಲ್ಲಿ ಅಚ್ಚಳಿಯದ ನೆನಪನ್ನು ಹೊತ್ತುಕೊಂಡು ಮತ್ತದೇ ನಿಮ್ಮ ಮಾಮೂಲಿ ಅನಿವಾರ್ಯ ವಾಸಸ್ಥಾನಕ್ಕೆ ಒಲ್ಲದ ಮನಸ್ಸಿನಿಂದ ಹೋಗಿ ಬನ್ನಿ
ವಂದನೆಗಳೊಂದಿಗೆ ಪ್ರಶಾಂತ್ ರಾಜ್ ಎಂ

.jpg)
.jpg)
No comments:
Post a Comment