Thursday, 1 November 2012


ಅವಳಿಗೆ ಇಷ್ಟವಲ್ಲದ ಅವನ ಗುಣ.................!

ಅವಳೊಳಗೆ ಮುಗಿಯದ ನೆನಪು. ಮಾಗದ ಕನಸು.ತನ್ನವನು ಹೀಗೆ ಇರಬೇಕು ಅಂದುಕೊಳ್ಳುತಾಳೆ ಏನೇನೋ ಕಲ್ಪಿಸಿಕೊಂಡು ಸಂಬ್ರಮಿಸುತಾಳೆ. ಆದರೆ ಎಸ್ಟೋಬಾರಿ ಹಾಗಾಗುದೆ ಇಲ್ಲಾ. ಅವಳು ಅಂದುಕೊಂಡಂತೆ ಅವನು ಅವಳನ್ನು ಬೆಸೆಯುದೆ ಇಲ್ಲ. ನಿಮಗೊತ್ತ? ಪತಿಯ ಕೆಲವು ಗುಣಗಳು ಅವಳಿಗೆ ಇಷ್ಟ ವಾಗುದೆ ಇಲ್ಲ. ನಿರಾಸೆ. ಜಗಳ.ಎಲ್ಲವೂ ಶುರುವಾಗೋದು ಅವನ ಗುಣದಿಂದಲೇ

ಅವಳ birthaday ಗೆ ಅವನೆ ನೆನಪು ಮಾಡಿಕೊಂಡು ವಿಶ್ ಮಾಡಲಿ ಅಂದುಕೊಳ್ಳುತಾಳೆ. ಆದರೆ ಅವನು ಮರೆತು ಬಿಡುತಾನೆ. ಅತ್ತು ಕರೆದು ರಂಪ ಮಾಡಿ ಕೊನೆಗೆ ಅವನು ಅವಳಿಗಾಗಿ birthaday ಪಾರ್ಟಿ ಮಾಡಿದರು
ಅವನು ತನ್ನ ಹುಟ್ಟಿದ ದಿನ  ನೆನಪಿಟ್ಟು ಕೊಂಡಿಲ್ಲ ಅನ್ನೋದೇ ಅವಳ ಚಿಂತೆ

ಕಿರಿಕಿರಿ ಉಂಟುಮಾಡುವಾ ಸಂಗತಿ ಯೊಂದಿದೆ. ಅದೇನೆಂದರೆ ಗಂಡನ ಬೇಜವಾಬ್ದಾರಿ. ತರಕಾರಿ ತರುವುದರಿಂದಾ ಹಿಡಿದು ಮನೆಯ ಬಾಡಿಗೆ ತನಕವೂ ಅವಳೇ ನಿಬಾಇಸಬೇಕು. ನಿರು ಕುಡಿದ ಲೋಟವನ್ನು ತೊಳೆಯುದಿರಲಿ ಸಿಂಕ್ ತನಕವೂ ತೆಗೆದುಕೊಂಡು ಹೋಗಿ ಇಡದ ಗಂಡನ ಮೇಲೆ ಕೆಂಡ ಕಾರುತಾಳೆ  ಅವಳು.ಹಿಂಸೆ ನೀಡುವ ಸಂಗತಿ ಅಂದರೆ ಬಟ್ಟೆ. ಪುಸ್ತ್ತಕ.ಲ್ಯಾಪ್ಟಾಪ್ .ಅನ್ನು ಕಂಡ ಕಂಡಲ್ಲಿ ಬಿಸಾಡುವ ಗಂಡನ ಬೇಜವಾಬ್ದಾರಿ. ನಾನೇನು ನಿಮ್ಮ ಮನೆಯ ಕೆಲಸದವಳಾ ಅಂತಾಳೆ. ಎಲ್ಲಕಿಂತ ಹೆಚ್ಹು ಸಿಟ್ಟು ತರಿಸುದು ಯಾವುದಕ್ಕೆ ಗೊತ್ತ? ಇನ್ನೊಬ್ಬ ಮಹಿಳೆ ಮಾಡುವಾ ಅಡಿಗೆ ಹೊಗಳುವುದು ಅವಳೆದುರು ಇವಳನ್ನು ಕೀಲಾಗಿ ಕಾಣುವ ಪತಿ ಅಂದ್ರೆ ಸತ್ರು ಅನ್ನೋ ಬಾವನೆ ಅವಳಿಗೆ. ಹಾಗಂತ ಅವಳಿಗೆ ಗಂಡನ ಮೇಲೆ ಪ್ರೀತಿ ಇಲ್ಲ ಅಂದಲ್ಲ. ಅವಳು ಗಂಡನನ್ನು ಬಿಟ್ಟು ಕೊಡುವುದೂ ಇಲ್ಲ. ಹೆಣ್ಣಿನ ಮನಸ್ಸೇ ಹಾಗೆ.  


ಮನೆಗೆಸಕ್ಕೆ ಬಾಗಿಯಗಾದೆ. ರಜಾ ದಿನಗಳಲ್ಲಿ ತಾವೊಬ್ಬರೇ ಹೊರಗಡೆ ಹೋಗಿ ಮಾಜಾ ಮಾಡುವ ಗಂಡ ಪತ್ನಿಯ ಬಾವನೆಗಳನ್ನ ಅರ್ಥ ಮಾಡಿಕೊಳ್ಳುದೆ ಇಲ್ಲ ಅಂತ್ತಲ್ಲಾ. ಅವನಿಗೆ ಅವಳಮೇಲೆ ಅಸಹನೆ. ನಿರ್ಲಕ್ಷ ಬಾವನೆಗಳಿವೆ ಅಂತನೂ ಅಲ್ಲ.ಅದೊಂತರ ಅವನು ಬೆಳೆದ. ರೂಡಿಸಿಕೊಂಡು ಬಂದಾ ಬದುಕಿನ ಶೈಲಿ. ಹಾಗಂತ ಅದೇನು ಒಳ್ಳೆಯ ಅಬ್ಯಾಸ ವೆನಲ್ಲಾ. ಅವಳಿಗೂ ತನ್ನ ಪತಿ ಹೀಗೆ ಇರಬೇಕು ಅಂತ ಕನಸುಗಳಿರುತವೆ. ಹಾಗಂತ ಅವಳು ಹೇಳಿದಂತೆ ಬದುಕಿ ಬಿಡುವುದಲ್ಲಾ. ಅವಳ ಇಷ್ಟದಂತೆ ಬದುಕಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ನಿಮ್ಮ ಅಸ್ತಿತ್ವದ ಬುಡ ಅಲ್ಲಾಡುದಿಲ್ಲ ಸ್ನೇಹಿತರೆ ...........

2 comments: