Saturday, 1 September 2012



ನಮ್ಮನಗಲಿ ಚಿರನಿದ್ರೆಗೆ ಜಾರಿದ   ನನ್ನ ಪ್ರೀತಿಯ ಅಯ್ಯ ............ ಮರೆತೆನೆಂದರೂ ಮರೆಯಲಾರೆ 



ಬದುಕು ಹೇಗೆ ಬೇಕೋ ಹಾಗೆ ಸಾಗಿದಾಗ ಒಮ್ಮೊಮ್ಮೆ ಕೆಲವು ತಿರುವುಗಳು ಮತ್ತು ವ್ಯಕ್ತಿಗಳು ಅದನ್ನು ಸಾಗ ಬೇಕಾದ ದಾರಿಯಲ್ಲಿ ಸಾಗುವಂತೆ ಮಾಡಿ ದೊಡ್ದವರೆನಿಸಿ ಕೊಳ್ಳುತಾರೆ. ಅದು ಅವರ ಕರ್ತವ್ಯವೋ. ಜವಾಬ್ದರಿಯೋ, ತಿಳಿಯದು!
ನಾನೀಗ ಹೇಳ ಹೊರಟಿರುವುದು ಜೀವನದ ಗೆಲುವಿಗಾಗಿ ಒಂದಷ್ಟು ಪರಿಶ್ರಮ. ತಾಳ್ಮೆ ,ಹೊಂದಾಣಿಕೆ.ತ್ಯಾಗದ ಗುಣಗಳನ್ನು ಬೆಳೆಸಿಕೊಂಡಿದ್ದ ನಮ್ಮ ಅಜ್ಜ(ಅಯ್ಯ)ನ ಬಗ್ಗೆ 

ಬದುಕಿನುದ್ದಕ್ಕೂ ನೋವನ್ನೇ ಉಂಡು ನಮಗೆಲ್ಲ ಸಿಹಿ ಬಡಿಸಿದ ಅಜ್ಜ(ಅಯ್ಯ)ನಮಗೋಸ್ಕರ ಆಸ್ಪತ್ರೆಗೋ .ಶಾಲೆಗೋ.ನೆಂಟರಮನೆಗೋ. ನಮ್ಮನ್ನ ಹೊತ್ತು ಅಲೆದಾಡಿದ್ದ ದಿನಗಳನ್ನು ನೆನೆಸಿಕೊಂಡರೆ ಕರುಳು ಬಾಯಿಗೆ ಬಂದಂತೆ 

ಒಬ್ಬ ವ್ಯಕ್ತಿ ನಮ್ಮ ಬಳಿ ಇರುವಾಗ ಅವರ ಬೆಲೆ ತಿಳಿಯುವುದಿಲ್ಲ ಅವರು ದೂರಹೋದಮೆಲೆಯೇ ಅವರ ಬೆಲೆ ತಿಳಿಯುವುದು ಅನ್ನೋದು ಬರಿ ಆಡು ಮಾತಲ್ಲ ಅನ್ನಿಸಿದ್ದು,

ವಿದಿವಶರಾಗಿ ಅಲ್ಲೆಲ್ಲೋ ದೂರದಲ್ಲಿದ್ದೆ  ಇಲ್ಲಿ ನಡೆಯುತ್ತಿರುವ ಕಾರ್ಯಗಳತ್ತ ಕಣ್ಣಿಟ್ಟಿರುವ ನಮ್ಮಅಜ್ಜ .ಅಯ್ಯ ನಿಗೆ ಉದ್ದಂಡ ನಮಸ್ಕಾರಗಳು  ಈ ಒಂದು ತಿಂಗಳಿಂದ ಪ್ರತಿ ಬಾರಿ ಫೋನ್ ಮಾಡಿದಾಗ ಅಯ್ಯ ನ  ಅನಾರೋಗ್ಯ ತಿಳಿಯುತಲೇ ಇತ್ತು, ಅಯ್ಯ ತುಂಬಾ ಕ್ರುಶನಾಗಿದ್ದಾನೆ, ತನ್ನಷ್ಟಕ್ಕೆ ನಡೆಯಲಾರ,ಮೊನ್ನೆ ಅಂಗಳದಲ್ಲಿ ಆಯತಪ್ಪಿ ಬಿದ್ದ,ಅಯ್ಯ  ಈಗ ಅಸ್ಪತ್ರೆಯಲ್ಲಿದ್ದಾನೆ-ಇಂಥ ವರದಿಯಲ್ಲ ಪ್ರತಿವಾರ ತಿಳಿಯುತ್ತಿದ್ದರೂ ಅಯ್ಯನನ್ನು ಆ ರೀತಿ ನೆನೆಸಿಕೊಳ್ಳಲು ನಮಗೆ ಸಾಧ್ಯವಾಗಲೇ ಇಲ್ಲಾ

. ಯಾಕಂದರೆ ಸದಾ ಚಟುವಟಿಕೆಯಿಂದ ದೊಡ್ಡದನಿಯಲ್ಲಿ ಮಾತಾಡುವ - ನಗುವ, ಇದ್ದಕ್ಕಿದ್ದಂತೆ ಕಣ್ಣುಕೆಂಪಾಗಿಸಿ ಹತ್ತಿರದವರನ್ನು ಹೆದರಿಸುವ, ಮೊಮ್ಮಕ್ಕಳನ್ನ ಸದಾ ಬೈಯುವ , ಪ್ರೀತಿಸುವ,  ಕೊಂಡಾಡುವ, ನಮಗೋಸ್ಕರ ಹಾತೊರೆಯುವ,ಹಾರೈಸುವ, ಅಯ್ಯನನ್ನೇ ಕಂಡಿದ್ದ ನಾವು - ಮರಣಶಯ್ಯೆಯಲ್ಲಿ  ಮಲಗಿದ್ದ ಅಯ್ಯನನ್ನ  ಹೇಗೆ ನೆನೆಸಿಕೊಂಡೆವು

ಹೌದು ನಂಬಲು ಕಹಿಯಾದರು  ಅದೂ ಸತ್ಯ ಅಯ್ಯನನ್ನು ಕೊನೆಗೂ ನೋಡಿದ್ದು ಹೆಣವಾದಮೇಲೆ,ಕೊನೆಯುಸಿರು ಎಳೆಯುವಾಗ ಏನನ್ನೋ ಹೇಳಲು ಒದ್ದಾಡಿ ಹೇಳಲಾಗದೆ ಮನದ ಮಾತನ್ನು ತನ್ನಲ್ಲೇ ಮರೆಮಾಚಿ ವಿದಿಗೆ ಶರಣಾಗಿದ್ದ. ಅಯ್ಯ ಗಾoಬಿರ್ಯವಾಗಿ ಮಾತನಾಡುವಾಗ  ಸಾಕು ಸುಮ್ಮನಿರು ಅನ್ನುತಿದ್ದ ನಾವು, ಕೇಳಲು ರೆಡಿ ಇದ್ದು ಹೇಳು ಹೇಳು ಅಂದ್ರು ಅಯ್ಯ ಮಾತನಾಡದೆ ಹೋಗಿದ್ದ ಇದೆe ಅಲ್ಲವೇ ವಿದಿ  ಬರಹ ಎಂದರೆ , ಕೊನೆಗೂ ಅಯ್ಯನ ಮಾತನ್ನ ಕೇಳಲಾಗಲಿಲ್ಲ (ಹೊಟ್ಟೆಪಾಡಿಗಾಗಿ   ದೂರದೂರಿನಲ್ಲಿ ಬಂದು ನೆಲೆಸಿದ್ದೆ  ಇದ್ದಕ್ಕೆ   ಕಾರಣ, ಎನ್ನುವ ಬೇಸರ ಒಂದೆಡೆ )ಇಗಾ ಅಯ್ಯ ಬೇಕೆಂದರು ಮತ್ತೆ ಸಿಗಲಾರ ಯಾರನ್ನ ಕೇಳುವುದು ವಿದಿಯನ್ನೇ ಅಥವಾ ನಮ್ಮ ಹೊಟ್ಟೆಯನ್ನೇ 

ಇದಕ್ಕೆ ಸ್ನೇಹಿತರೆ ಯಾರೂ  ನಿಮ್ಮ ಅಜ್ಜ- ಅಜ್ಜಿ ಅಪ್ಪ- ಅಮ್ಮ ನನ್ನು ಮಿಸ್ ಮಾಡಿಕೊಳ್ಳಬೇಡಿ. ಒಮ್ಮೆ ಕಳೆದುಕೊಂಡರೆ ಮತ್ತೆ ಬೇಕೆಂದರು ಸಿಗಲಾರರು, ಅವರ ಪ್ರೀತಿಯ ಕೊಡಲಾರರು,)

ಹೇಗೆ ಇರಲಿ ನಾವು ಅವರ ಪಾದದ ಹೂವುಗಳು ಜೀವನದುದ್ದಕ್ಕೂ ಕಸ್ಟ್ಟಪಟ್ಟ ಅಯ್ಯ ಮುಂದಿನ ಜನುಮದಲ್ಲದರು ಸುಖವಾಗಿರಲಿ ಅಯ್ಯ ನೀನು ನಮ್ಮನಗಲಿದರು ನಿನ್ನ ನೆನಪು ಮಾತ್ರ ಶಾಶ್ವತ ನೀ ಕೊಟ್ಟ ಪ್ರೀತಿ ಬೇರೆಯಾರಿಂದಲೂ ಕೊಡಲು ಸಾದ್ಯವಿಲ್ಲ ನಮ್ಮನ್ನ ಎತ್ತಿ ಆಡಿಸಿ ಬೆಳೆಸಿ ನಿನ್ನ ಕರ್ತವ್ಯವನ್ನ ನಿ ಮುಗಿಸಿದೆ ಆದ್ರೆ ನಿನ್ನ ಕೊನೆದಿನಗಳಲ್ಲಿ ನಿನ್ನ ಸೇವೆಮಾಡೋ ದಿರಲಿ ನೀ ಕೊನೆಯುಸಿರೆಳೇಯುವಾಗ ಕೂಡ ನಿನ್ನ ಬಳಿ ಇರಲು  ಸಾದ್ಯವಿಲ್ಲದೆ ಹೊಇತು ನೀ ಕೊಟ್ಟ ಪ್ರೀತಿ ನೀ ತೋರಿದ ಕಾಳಜಿ ಮೂರು ಜನ್ಮ್ಮಗಳಿಗಾಗುವಸ್ಟುನಿಂಗೆ ನಮ್ಮಿಂದ ಕೊಡಬಹುದೆಂದರೆ  ನಿನ್ನ ( ಅಯ್ಯನ) ಆದರದ ಪ್ರೀತಿಗೆ ಕಣ್ಣ ಹನಿಗಳೇ ಕಾಣಿಕೆ. ನಾವು ಅವರಿಗೆ ಕೊಡಲು ಇಸ್ಟ್ಟುಮಾತ್ರಸಾದ್ಯ 
  ಮುಂದಿನ ಜನುಮದಲಾದರು ಯಾರ ಹಂಗಿಲ್ಲದೆ ಸುಖವಾಗಿಬಾಳು
ಆ ದೇವರು ನಿನ್ನನ್ನ ಚನ್ನಾಗಿ ಇಟ್ಟಿರಲಿ ಹೋಗಿ ಬಾ ಅಯ್ಯ





No comments:

Post a Comment