Sunday, 17 June 2012

ಇಬ್ಬನಿಯಹಾಧಿಯಲ್ಲಿ ಒಂದುದಿನ .................!


ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,

ಮುಂಗೈಗೆ ಜಾರಿದ ಆಲಿಕಲ್ಲು ನೀನು;

ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು,

ಏನೆಂದು ಬಣ್ಣಿಸಲಿ ನಾನು.

ಚುಮು ಚುಮು ಮುಂಜಾವಿನಲಿ, ನಗುತಿದ್ದ ಹಸಿರ ಮೈಮೇಲೆ,

  1. ನಲಿಯುತಿದ್ದ ಬಿಂದುವಿನೊಳಗೆ ನಿನ್ನ ಬಿಂಬ;

ಚಳಿಗೆ ಮುದುಡಿದ ಕೈಯೊಳಿದ್ದ, ಚಹದ ಬಟ್ಟಲಿನಿಂದ ಎದ್ದ

ಹಬೆಯೊಳಗೂ ಮೂಡಿತ್ತು, ನಿನ್ನದೇ ಬಿಂಬ.

ಮೌನ ಹಾದಿಯಲಿ ಒಂಟಿ ಪಯಣಿಗ ನಾನು, ಜೊತೆಯಿರಲು

ನಿನ ಮಾತು, ನನಗಷ್ಟೇ ಸಾಕು;

ದುಃಖದಿ ಮುಳುಗುವ ನನ್ನ ಹೃದಯಕೆ, ಅಮೃತ ಸಿಂಚನ

ನಿನ್ನೀ ನಗುವಿನ ಪಲುಕು.

ಎಂದಿಗೂ ಬತ್ತದ ಪ್ರೇಮದ ಒರತೆಯ ನೀ ಹೊತ್ತು,

ನನ್ನ ಕನಸನು ಸೇರಿಕೋ;

ಭಾವಕೊಳವನು ಕದಡಿದ ಓ ನನ್ನ ಪ್ರೇಮವೇ

ಈ ಪ್ರೇಮವನು ಒಪ್ಪಿಸಿಕೋ.

2 comments:

  1. Wow...........!!!!
    What A Beauty!!!!!!
    ಎಲ್ಲಿ ತೆಗೆದಿದ್ದು ಇದು????

    ReplyDelete
  2. ನಮ್ಮೂರಿನ ನನ್ನ ಬಾಲ್ಯ ಸ್ನೇಹಿತ ಫೋಟೋ ಗ್ರಪರ್

    ReplyDelete