ಸದ್ದಿಲ್ಲದೇ ಶುರುವಾದ ಮಳೆಗೆ ಕೈಯೊಡ್ಡಿದಾಗ,
ಮುಂಗೈಗೆ ಜಾರಿದ ಆಲಿಕಲ್ಲು ನೀನು;
ಆ ತಂಪಾದ ಸ್ಪರ್ಶಹಿತ ಸವಿದ ಕ್ಷಣವನು,
ಏನೆಂದು ಬಣ್ಣಿಸಲಿ ನಾನು.
ಚುಮು ಚುಮು ಮುಂಜಾವಿನಲಿ, ನಗುತಿದ್ದ ಹಸಿರ ಮೈಮೇಲೆ,
- ನಲಿಯುತಿದ್ದ ಬಿಂದುವಿನೊಳಗೆ ನಿನ್ನ ಬಿಂಬ;
ಚಳಿಗೆ ಮುದುಡಿದ ಕೈಯೊಳಿದ್ದ, ಚಹದ ಬಟ್ಟಲಿನಿಂದ ಎದ್ದ
ಹಬೆಯೊಳಗೂ ಮೂಡಿತ್ತು, ನಿನ್ನದೇ ಬಿಂಬ.
ಮೌನ ಹಾದಿಯಲಿ ಒಂಟಿ ಪಯಣಿಗ ನಾನು, ಜೊತೆಯಿರಲು
ನಿನ ಮಾತು, ನನಗಷ್ಟೇ ಸಾಕು;
ದುಃಖದಿ ಮುಳುಗುವ ನನ್ನ ಹೃದಯಕೆ, ಅಮೃತ ಸಿಂಚನ
ನಿನ್ನೀ ನಗುವಿನ ಪಲುಕು.
ಎಂದಿಗೂ ಬತ್ತದ ಪ್ರೇಮದ ಒರತೆಯ ನೀ ಹೊತ್ತು,
ನನ್ನ ಕನಸನು ಸೇರಿಕೋ;
ಭಾವಕೊಳವನು ಕದಡಿದ ಓ ನನ್ನ ಪ್ರೇಮವೇ
ಈ ಪ್ರೇಮವನು ಒಪ್ಪಿಸಿಕೋ.
Wow...........!!!!
ReplyDeleteWhat A Beauty!!!!!!
ಎಲ್ಲಿ ತೆಗೆದಿದ್ದು ಇದು????
ನಮ್ಮೂರಿನ ನನ್ನ ಬಾಲ್ಯ ಸ್ನೇಹಿತ ಫೋಟೋ ಗ್ರಪರ್
ReplyDelete